image: http://www.udayavani.com/sites/default/files/styles/article_image/public/images/articles/2015/07/21/Asaram-bg.jpg?itok=No4QYSdD
ಆಸಾರಾಂ ಬಾಪು ತನ್ನ ವಿರುದ್ಧದ ಪ್ರಮುಖ ಸಾಕ್ಷಿದಾರನಿಗೆ ಲಂಚ ಒಡ್ಡುವ ಈ ಆಡಿಯೋ ಕ್ಲಿಪ್ಪನ್ನು ಎಂಟು ತಿಂಗಳ ಹಿಂದೆಯೇ ದಾಖಲಿಸಿಕೊಳ್ಳಲಾಗಿತ್ತು. ಕಳೆದ ಜುಲೈ 10ರಂದು ಶಹಜಹಾನ್‌ಪುರದಲ್ಲಿ ಆಸಾರಾಂ ಬೆಂಬಲಿಗರಿಂದ ಹಲ್ಲೆಗೆ ಗುರಿಯಾಗಿ ಮೃತಪಟ್ಟ ಜೋಧ್‌ಪುರ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿದಾರ ಕೃಪಾಳ್ ಸಿಂಗ್ ನಿಂದ ತಾನಿದನ್ನು ಪಡೆದುಕೊಂಡೆನೆಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ ಎಂಬುದಾಗಿ ಶಹಜಹಾನ್‌ಪುರ ಪೊಲೀಸ್ ಸುಪರಿಂಟೆಂಡೆಂಟ್ ಬಬ್ಲೂ ಕುಮಾರ್ ಹೇಳಿದ್ದಾರೆ.
ಆಡಿಯೋ ಕ್ಲಿಪ್ ನ ಋಜುತ್ವವನ್ನು ಪರೀಕ್ಷಿಸಲಾಗುತ್ತಿದೆ. ಇದರಲ್ಲಿನ ಧ್ವನಿಯು ಆಸಾರಾಂ ಬಾಪುವಿನ ಈಗಾಗಲೇ ದಾಖಲಾಗಿರುವ ಧ್ವನಿಗೆ ತಾಳೆಯಾದ ಪಕ್ಷದಲ್ಲಿ ಇದನ್ನು ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷ್ಯವಾಗಿ ಬಳಸಿಕೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು.
ಆಡಿಯೊ ಕ್ಲಿಪ್ ನಲ್ಲಿ ಆಸಾರಾಂ ಬಾಪು, ತನ್ನ ವಿರುದ್ಧದ ಅತ್ಯಾಚಾರ ಪ್ರಕರಣದ ಸಾಕ್ಷಿದಾರನಿಗೆ, ಲಂಚದ ಶೇ.50ರಷ್ಟನ್ನು ಈಗಲೇ ನೀಡುವುದಾಗಿ ಉಳಿದರ್ಧವನ್ನು ಕೆಲಸ ಮುಗಿದಾಗ ನೀಡುವುದಾಗಿ ಹೇಳುವುದು ಕೇಳಿಬರುತ್ತಿದೆ ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ಹೇಳಿದ್ದಾರೆ.
ಸಾಕ್ಷಿದಾರನೊಂದಿಗಿನ ಈ ಸಂಭಾಷಣೆಯನ್ನು ಆಸಾರಾಂ ನಿಕಟವರ್ತಿಗಳಾಗಿರುವ ರಾಘವ ಮತು ಸಂಜಯ್ ವ್ಯವಸ್ಥೆಗೊಳಿಸಿದ್ದು ಈ ವ್ಯಕ್ತಿಗಳೇ ಜು.10ರಂದು ಕೃಪಾಳ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರಾಗಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆಯ ತಂದೆ ದೂರಿದ್ದಾರೆ
No comments:
Post a Comment