ಅತ್ಯಾಚಾರ, ಬ್ಲ್ಯಾಕ್ ಮೇಲ್ ಗೆ ಗುರಿಯಾಗಿರುವ ವಿದ್ಯಾರ್ಥಿನಿಯು ಇಲ್ಲಿನ ಇಂದ್ರನಗರ ಪ್ರದೇಶದ ನಿವಾಸಿಯಾಗಿದ್ದು ಖಾಸಗಿ ಕಾಲೇಜಿನಲ್ಲಿ ಎಂಬಿಎ ಶಿಕ್ಷಣ ಪಡೆಯುತ್ತಿದ್ದಾಳೆ. ವರ್ಷದ ಹಿಂದೆ ಆಕೆಗೆ ಅಜಿತ್ ಸಿಂಗ್ ಎಂಬಾತನೊಂದಿಗೆ ಸ್ನೇಹವಾಗಿತ್ತು ಎಂದು ಕಲ್ಯಾಣಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕಮಲ್ ಯಾದವ್ ತಿಳಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆ ಕೊಟ್ಟಿರುವ ದೂರಿನ ಪ್ರಕಾರ ಆಕೆಯ ಹೇಳಿಕೆ ಹೀಗಿದೆ: ನನ್ನ ತಂದೆ ಕ್ಯಾನ್ಸರ್ ರೋಗಿಯಾಗಿದ್ದು ಆತನನ್ನು ಕೋಲ್ಕತಕ್ಕೆ ಚಿಕಿತ್ಸೆಗಾಗಿ ಮನೆಯವರು ಒಯ್ದಿದ್ದರು. ಆಗ ನಾನು ಸಂಬಂಧಿಕರ ಮನೆಯಲ್ಲಿ ಉಳಿದಿದ್ದೆ. ಆರೋಪಿ ಅಜಿತ್ ಸಿಂಗ್ ಯಾವುದೋ ಅಧ್ಯಯನ ಪಠ್ಯವನ್ನು ಕೊಡುವ ನೆಪದಲ್ಲಿ ಅಲ್ಲಿಗೆ ಬಂದಿದ್ದ. ಆ ಮನೆಯಲ್ಲಿ ಯಾರೂ ಇಲ್ಲದಿದ್ದ ಹೊತ್ತಿನಲ್ಲಿ ನನ್ನ ಮೇಲೆ ಲೈಂಗಿಕ ಹಲ್ಲೆ, ಅತ್ಯಾಚಾರ ನಡೆಸಿದ್ದಾನೆ. ಮಾತ್ರವಲ್ಲದೆ ಅದನ್ನು ವಿಡಿಯೋದಲ್ಲೂ ಚಿತ್ರೀಕರಿಸಿಕೊಂಡಿದ್ದಾನೆ. ಆಧಾರದಲ್ಲಿ ಆತ ನನ್ನನ್ನು ಬ್ಲ್ಯಾಕ್ ಮೇಲ್ ಮಾಡಿ ಆ ಬಳಿಕ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ.
ಅತ್ಯಾಚಾರ ಸಂತ್ರಸ್ತೆಯು ತನ್ನ ಹೆತ್ತವರು ಕೋಲ್ಕತೆಯಿಂದ ನಗರಕ್ಕೆ ಮರಳಿದ ಬಳಿಕ ಪೊಲೀಸರಿಗೆ ತನ್ನ ಮೇಲಿನ ಅಕೃತ್ಯದ ಬಗ್ಗೆ ದೂರು ನೀಡಿದ್ದಾಳೆ. ಆರೋಪಿ ಅಜಿತ್ ಸಿಂಗ್, ಮಥುರಾ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಸಿಂಗ್ ಎಂಬಾತನ ಮಗನೆಂದು ಗೊತ್ತಾಗಿದೆ ಎಂಬುದಾಗಿ ಇನ್ಸ್‌ಪೆಕ್ಟರ್ ಯಾದವ್ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಪರಿತ್ಯಕ್ತ ಪ್ರಣಯ ಪ್ರಸಂಗವೆಂದು ತೋರಿಬರುತ್ತದೆ. ಆದರೂ ನಾವು ಯುವತಿಯ ದೂರಿನ ಪ್ರಕಾರ ಆರೋಪಿ ಅಜಿತ್ ಸಿಂಗ್ ವಿರುದ್ಧ ರೇಪ್ ಕೃತ್ಯದ ದೂರನ್ನು ದಾಖಲಿಸಿಕೊಂಡು ಆತನ ಬಂಧನಕ್ಕೆ ಜಾಲ ಬೀಸಿದ್ದೇವೆ ಎಂದು ಯಾದವ್ ಹೇಳಿದ್ದಾರೆ.
No comments:
Post a Comment