ಯೋಜನೆ ಬಗ್ಗೆ ಜಪಾನಿನ ದಿ ಜಪಾನ್ ಇಂಟರ್‌ನ್ಯಾಷನಲ್ ಕಾಪರೇಷನ್ ಏಜೆನ್ಸಿ (jisc) ಅಧ್ಯಯನ ನಡೆಸಿದ್ದು ಯೋಜನೆಗಾಗಿ 98,805 ಕೋಟಿ ರೂ. ಬೇಕಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಬುಲೆಟ್ ರೈಲು ಯೋಜನೆ ವರದಿಯನ್ನು ಭಾರತದ ಜಪಾನ್ ರಾಯಭಾರಿ ತಾಕೇಶಿ ಅವರ ನೇತೃತ್ವದಲ್ಲಿ ಜೆಐಸಿಎ ಅಧಿಕಾರಿಗಳ ನಿಯೋಗ ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಸೋಮವಾರ ನೀಡಿದೆ.
2 ತಾಸು ಪ್ರಯಾಣ: ಒಂದೊಮ್ಮೆ ಬುಲೆಟ್ ರೈಲು ಯೋಜನೆ ಪೂರ್ಣವಾಗಿ ಮುಕ್ತಾಯಗೊಂಡರೆ, ಮುಂಬೈ-ಅಹಮದಾಬಾದ್ ನಡುವಿನ 505 ಕಿ.ಮೀ. ದೂರವನ್ನು ಕೇವಲ 2 ಗಂಟೆಗಳಲ್ಲಿ ಕ್ರಮಿಸಬಹುದಾಗಿದೆ. ಸದ್ಯ ಈ ದೂರವನ್ನು ಕ್ರಮಿಸಲು 7 ಗಂಟೆ ಸಮಯ ಬೇಕಾಗುತ್ತದೆ. ಗಂಟೆಗೆ 300 ಕಿ.ಮೀ. ವೇಗದಲ್ಲಿ ಈ ರೈಲು ಸಂಚರಿಸಲಿದೆ. ಇದರೊಂದಿಗೆ ಇದರ ಟಿಕೆಟ್ ಬೆಲೆಯೂ ರಾಜಧಾನಿ ಎಕ್ಸ್‌ಪ್ರೆಸ್‌ನ ಫಸ್ಟ್ ಎಸಿ ಟಿಕೆಟ್ ಬೆಲೆಗಿಂತ ಹೆಚ್ಚಿಗಿರಲಿದ್ದು ಸುಮಾರು 2800 ರೂ.ಗಳಷ್ಟಾಗಲಿದೆ.
ಸದ್ಯ ಬುಲೆಟ್ ರೈಲು ವರದಿಯನ್ನು ರೈಲ್ವೇ ಇಲಾಖೆ ಪರಾಮರ್ಶಿಸಲಿದ್ದು, ಬಳಿಕ ನಿರ್ಧಾರ ಕೈಗೊಳ್ಳಲಿದೆ. ಇದರೊಂದಿಗೆ ಯೋಜನೆಗೆ ಸಂಪುಟ ಸಮ್ಮತಿ, ಯೋಜನೆಯ ಅಂತಿಮ ರೂಪುರೋಷೆಗಳು, ಸಮಯ ನಿಗದಿಯನ್ನು ಮುಂದಿನ ತಿಂಗಳು ಮಾಡುವ ಸಾಧ್ಯತೆಇದೆ.
ಸದ್ಯದ ಅಂದಾಜಿನ ಪ್ರಕಾರ ಬುಲೆಟ್ ರೈಲು ಯೋಜನೆ 2017ರಲ್ಲಿ ಶುರುವಾಗಲಿದ್ದು, 2023ಕ್ಕೆ ಮುಕ್ತಾಯವಾಗಲಿದೆ. 2024ರ ವೇಳೆಗೆ ಇದು ಸಂಚಾರ ಆರಂಭಿಸಲಿದೆ. ಸುಮಾರು 40 ಸಾವಿರ ಮಂದಿಯ ನಿತ್ಯ ಪ್ರಯಾಣಕ್ಕೆ ಈ ರೈಲು ಸಹಾಯವಾಗಲಿದೆ ಎನ್ನಲಾಗಿದೆ. ಜೆಐಸಿಎ ಹೊರತಾಗಿ ಎಸ್‌ಎನ್‌ಎಫ್ಸಿ ಫ್ರಾನ್ಸ್ ಈ ಮಾರ್ಗದ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ರೈಲ್ವೇ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.
No comments:
Post a Comment