Tuesday, 21 July 2015

ಎಸ್‌ಪಿ ನಾಯಕನ ಮಗ & ಬಾಲಕಿಯ ಗ್ಯಾಂಗ್‌ ರೇಪ್‌

image: http://www.udayavani.com/sites/default/files/styles/article_image/public/images/articles/2015/07/21/gang-Rape.jpg?itok=cZl4Ydxz

ಬದೌನ್‌ (ಉತ್ತರ ಪ್ರದೇಶ) : ಇಲ್ಲಿನ ಕಡಾರ್‌ ಎಂಬ ಪ್ರದೇಶದಲ್ಲಿ 14 ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಳೆ ಸಮಾಜವಾದಿ ಪಕ್ಷದ ನಾಯಕನ ಮಗ ಮತ್ತು ಇಬ್ಬರು ಸೇರಿ ಗ್ಯಾಂಗ್‌ ರೇಪ್‌ ಮಾಡಿದ ಹೇಯ ಘಟನೆ ಬೆಳಕಿಗೆ ಬಂದಿದೆ. 
ಜುಲೈ 18 ರ ರಾತ್ರಿ  ನಡೆದಿದ್ದು,ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತೇಕ್‌ಜಂದ್‌ ಪಾಲ್‌ ಎನ್ನುವರ ಮಗ ಓಮೇಂದ್ರ ಪಾಲ್‌,ನರೇಂದ್ರ ಮತ್ತು ಸುರೇಂದ್ರ ಎನ್ನುವವರು ಬಾಲಕಿಯನ್ನು ಅಪಹರಿಸಿ ಮಾವಿನ ತೋಪಿಗೆ ಎಳೆತೊಯ್ದು  ಅತ್ಯಾಚಾರ ಎಸಗಿದ್ದಾರೆ. 
ಬಾಲಕಿಯ ಮನೆಯವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಚಾರ ಧೃಡಪಟ್ಟಿದೆ. 
ಸುರೇಂದ್ರ ಎಂಬಾತನನ್ನು ಬಂಧಿಸಲಾಗಿದ್ದು, ಎಸ್‌ಪಿ ನಾಯಕನ ಮಗ ಸೇರಿದಂತೆ ಇಬ್ಬರು ಆರೋಪಿಗಳ ಬಂಧನ ಇನ್ನೂ ಸಾಧ್ಯವಾಗದಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ.

No comments:

Post a Comment